URL ಗಳ ಪಟ್ಟಿಗೆ ಪ್ರವೇಶಿವನ್ನು ನಿರ್ಬಂಧಿಸಿ

ಪಟ್ಟಿ ಮಾಡಲ್ಪಟ್ಟಿರುವ URL ಗಳಿಗೆ ಪ್ರವೇಶವನ್ನು ನಿರ್ಬಂಧಿಸುತ್ತದೆ.

ಕಪ್ಪುಪಟ್ಟಿಗೆ ಸೇರಿಸಲಾಗಿರುವ URL ಗಳಿಂದ ವೆಬ್ ಪುಟಗಳನ್ನು ಲೋಡ್ ಮಾಡದಂತೆ ಈ ನೀತಿಯು ಬಳಕೆದಾರರನ್ನು ತಡೆಗಟ್ಟುತ್ತದೆ. ಯಾವ URL ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂಬುದನ್ನು ತಿಳಿಸುವ URL ನಮೂನೆಗಳ ಪಟ್ಟಿಯನ್ನು ಕಪ್ಪುಪಟ್ಟಿಯು ಒದಗಿಸುತ್ತದೆ.

ಪ್ರತಿ URL ನಮೂನೆಯು ಸ್ಥಳೀಯ ಫೈಲ್‌ಗಳಿಗೆ ನಮೂನೆಯಾಗಿರಬಹುದು ಅಥವಾ ಸಾರ್ವತ್ರಿಕ URL ನಮೂನೆಯಾಗಿರಬಹುದು. ಸ್ಥಳೀಯ ಫೈಲ್ ನಮೂನೆಗಳು 'file://path' ಫಾರ್ಮ್ಯಾಟ್‌‌ನಲ್ಲಿರುತ್ತವೆ. ಇಲ್ಲಿ ಹಾದಿಯು ನಿರ್ಬಂಧಿಸಲು ಸರಿಯಾದ ಹಾದಿಯಾಗಿರಬೇಕು. ಆ ಹಾದಿಯು ಪೂರ್ವಪ್ರತ್ಯಯವಾಗಿರುವ ಎಲ್ಲಾ ಫೈಲ್ ಸಿಸ್ಟಂ ಸ್ಥಳಗಳನ್ನು ನಿರ್ಬಂಧಿಸಲಾಗುತ್ತದೆ.

ಸಾರ್ವತ್ರಿಕ URL ನಮೂನೆಯು 'scheme://host:port/path' ಫಾರ್ಮ್ಯಾಟನ್ನು ಹೊಂದಿರುತ್ತದೆ.
ಅಸ್ತಿತ್ವದಲ್ಲಿದ್ದರೆ, ಕೇವಲ ನಿರ್ದಿಷ್ಟಪಡಿಸಿದ ಸ್ಕೀಮ್ ಅನ್ನು ನಿರ್ಬಂಧಿಸಲಾಗುತ್ತದೆ. ಒಂದು ವೇಳೆ ಸ್ಕ್ರೀಮ್:// ಪೂರ್ವಪ್ರತ್ಯಯವನ್ನು ನಿರ್ದಿಷ್ಟಪಡಿಸದೇ ಇದ್ದರೆ, ಎಲ್ಲಾ ಸ್ಕೀಮ್‌ಗಳನ್ನು ನಿರ್ಬಂಧಿಸಲಾಗುತ್ತದೆ.
ಹೋಸ್ಟ್ ಅಗತ್ಯವಿರುತ್ತದೆ ಮತ್ತು ಇದು ಹೋಸ್ಟ್‌ಹೆಸರು ಅಥವಾ ಐಪಿ ವಿಳಾಸವಾಗಿರಬಹುದು. ಹೋಸ್ಟ್‌ಹೆಸರಿನ ಉಪಡೊಮೇನ್‌ಗಳನ್ನು ಸಹ ನಿರ್ಬಂಧಿಸಲಾಗುತ್ತದೆ. ಉಪಡೊಮೇನ್‌ಗಳನ್ನು ನಿರ್ಬಂಧಿಸುವುದನ್ನು ತಡೆಗಟ್ಟಲು, ಹೋಸ್ಟ್‌ಹೆಸರಿನ ಮೊದಲು '.' ಸೇರಿಸಿಕೊಳ್ಳಿ. ಎಲ್ಲಾ ಡೊಮೇನ್‌ಗಳನ್ನು ವಿಶೇಷ ಹೋಸ್ಟ್‌ಹೆಸರು '*' ನಿರ್ಬಂಧಿಸುತ್ತದೆ.
ಐಚ್ಛಿಕ ಪೋರ್ಟ್ ಎನ್ನುವುದು 1 ರಿಂದ 65535 ವರೆಗಿನ ಮಾನ್ಯವಾದ ಪೋರ್ಟ್ ಸಂಖ್ಯೆಯಾಗಿದೆ. ಯಾವುದನ್ನೂ ನಿರ್ದಿಷ್ಟಪಡಿಸದೇ ಇದ್ದರೆ, ಎಲ್ಲಾ ಪೋರ್ಟ್‌ಗಳನ್ನು ನಿರ್ಬಂಧಿಸಲಾಗುತ್ತದೆ.
ಐಚ್ಛಿಕ ಪಥವನ್ನು ನಿರ್ದಿಷ್ಟಪಡಿಸಿದ್ದರೆ, ಆ ಪೂರ್ವಪ್ರತ್ಯಯದ ಜೊತೆಗಿನ ಹಾದಿಗಳನ್ನು ಮಾತ್ರ ನಿರ್ಬಂಧಿಸಲಾಗುತ್ತದೆ.

URL ಅನುಮತಿ ಪಟ್ಟಿ ನೀತಿಯಲ್ಲಿ ವಿನಾಯಿತಿಗಳನ್ನು ನಿರೂಪಿಸಬಹುದು. ಈ ನೀತಿಗಳನ್ನು 1000 ನಮೂದುಗಳಿಗೆ ಮಿತಿಗೊಳಿಸಲಾಗಿದೆ; ನಂತರದ ನಮೂದುಗಳನ್ನು ನಿರ್ಲಕ್ಷಿಸಲಾಗುತ್ತದೆ.

ಅನಿರೀಕ್ಷಿತ ದೋಷಗಳಿಗೆ ಕಾರಣವಾಗಬಹುದಾದ್ದರಿಂದ ಆಂತರಿಕ 'chrome://*' URL ಗಳನ್ನು ನಿರ್ಬಂಧಿಸುವುದನ್ನು ಶಿಫಾರಸು ಮಾಡಲಾಗಿಲ್ಲ ಎಂಬುದನ್ನು ಗಮನಿಸಿ.

ಈ ನೀತಿಯನ್ನು ಹೊಂದಿಸದೇ ಇದ್ದರೆ ಯಾವುದೇ URL ಅನ್ನು ಬ್ರೌಸರ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗುವುದಿಲ್ಲ.

Supported on: Microsoft Windows XP SP2 ಅಥವಾ ನಂತರದ್ದು
URL ಗಳ ಪಟ್ಟಿಗೆ ಪ್ರವೇಶಿವನ್ನು ನಿರ್ಬಂಧಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\URLBlacklist
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)